ಉದಾಮ್ ಸಿಂಗ್: 1899-1940. ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ. ಪಂಜಾಬ್ನ ಅಮೃತಸರದಲ್ಲಿ ಜನಿಸಿದ. ಚಿಕ್ಕಂದಿನಲ್ಲಿ ಜನರಲ್ ಡೈಯರ್ ನೇತೃತ್ವದಲ್ಲಿ ನಡೆದ ಜಲಿಯನ್ ವಾಲಾಬಾಗ್ ದುರಂತದ ಮಾರಣ ಹೋಮದಿಂದ ಬ್ರಿಟಿಷ್ ವಿರೋಧಿ ಭಾವನೆ ಬೆಳೆಸಿಕೊಂಡ. ಇಂಗ್ಲೆಂಡ್ಗೆ ತೆರಳಿ ಲಂಡನ್ನಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ಸೇರಿದ. ಅಲ್ಲಿ ಕ್ರ್ರಾಂತಿಕಾರಿಗಳ ಸಂಪರ್ಕದೊಂದಿಗೆ 6 ಗುಂಡುಗಳ ರಿವಾಲ್ವರನ್ನು ಸಂಪಾದಿಸಿ ಕೊಂಡ. ಹಿಂದೆ ಜಲಿಯನ್ ವಾಲಾಬಾಗ್ ದುರಂತದ ವೇಳೆಯಲ್ಲಿ ಪಂಜಾಬಿನ ಗವರ್ನರ್ ಆಗಿ, ಪರೋಕ್ಷವಾಗಿ ದುರಂತಕ್ಕೆ ಕಾರಣನಾಗಿದ್ದ ಸರ್ ಮೈಕಲ್ ಓಡೈಯರ್ ನನ್ನು 1940 ಮಾರ್ಚ್ 13ರಂದು ಲಂಡನ್ನ ಕ್ಯಾಕ್ಸ್‌ಟೌನ್ ಹಾಲ್ ಸಭೆಯೊಂದರಲ್ಲಿ ಗುಂಡಿಟ್ಟುಕೊಂದ. ಆಗ ಇವನನ್ನು ಬಂಧಿಸಿ ವಿಚಾರಣೆ ನಡೆಸಿ 1940 ಜೂನ್ 12ರಂದು ಗಲ್ಲಿಗೇರಿಸಲಾಯಿತು.		

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ